Quantcast

ಯೋಗರಾಜ್ ಭಟ್ ಬರೆದಿದ್ದಾರೆ..

 

ಸದಾಶಿವ ಸೊರಟೂರು ಬರೆದ ‘ಭಟ್ಟರ ಮುಗುಳ್ನಗೆ’ ಲೇಖನಕ್ಕೆ

ಯೋಗರಾಜ ಭಟ್ಟರೇ ಉತ್ತರಿಸಿದ್ದಾರೆ 

Arrrrr.. ಈ ವಿಮರ್ಶೆ ನೋಡಿದ ನಂತರ ನನಗೆ ನಾಳೆಯಿಂದ ಸ್ವಲ್ಪ ನೆಟ್ಟಗೆ ಕೂತು ಬರೆಯಬೇಕು ಅನಿಸಿತು.. ಧನ್ಯವಾದ..
ತುಂಬಾಸಲ ನಿಮಗೆ ಅನಿಸಿದ್ದು ಹೇಳಿದ್ದೀರಿ. ಎಷ್ಟೋ ಜನಕ್ಕೆ ಇವತ್ತಿನ ಹೊಸ ಹಾಡುಗಳನ್ನು ಪೂರ್ತಿ ಸವಿಯುವ ತಾಳ್ಮೆ ಇರುವುದಿಲ್ಲ.. ಕಾಲ ಹಾಗಿದೆ..ತಪ್ಪಲ್ಲ.. ಅಂತದ್ರಲ್ಲಿ ಮೆಚ್ಚಿ ಸೀದಾ ತಬ್ಬುವ ಮಾತು ದೂರದ್ದು
ನೀವು ಈ ಕೆಲಸ ಎಷ್ಟು ಮುದ್ದಾಗಿ ಒಂದು ಪೇಜು ಬರಹದಲ್ಲಿ ಮಾಡಿದ್ದೀರಿ .. ನಮನ..
ನಿಮ್ಮೆಲ್ಲಾ ಪದಗಳು ಪ್ರತಿಕ್ರಿಯೆ ನೆನಪಲ್ಲಿರುತ್ತವೆ..

thanks again..
Regards- ಯೋಗರಾಜ್ ಭಟ್

Add Comment