Quantcast

ತಾಂತ್ರಿಕ ಕೌಶಲ್ಯದಲ್ಲಿ ‘ಪುಷ್ಪಕ ವಿಮಾನ’ 

nagendra

ನಾಗೇಂದ್ರ

ಮನಸ್ಸು ಹಾಗೂ ಹೃದಯ ತಟ್ಟುವ ಸಿನಿಮಾ ‘ಪುಷ್ಪಕ ವಿಮಾನ’ ಚಿತ್ರೀಕರಣ ಸಂಪೂರ್ಣಗೊಂಡು ಭರದಿಂದ ತಾಂತ್ರಿಕ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದೆ.

ಇಂದಿನ ‘ಪುಷ್ಪಕ ವಿಮಾನ’ ಭಾವನೆಗಳ ಮೆರವಣಿಗೆ – ಚಿತ್ರದಲ್ಲಿ ತಂದೆ ಹಾಗೂ ಮಗಳ ಅವಿನಾಭಾವ ಸಂಬಂಧದ ಸಂಧರ್ಭಗಳು ಮನಸ್ಸನ್ನು ತಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ. ವಿಕ್ಯಾತ್ ಚಿತ್ರ ಬ್ಯಾನ್ನರ್ ಅಡಿಯಲ್ಲಿ ವಿಕ್ಯಾತ್, ದೀಪಕ್ ಕೃಷ್ಣ, ದೇವೇಂದ್ರ ರೆಡ್ಡಿ ಜೊತೆ ಪವನ್ ಫಿಲ್ಮ್ ಫ್ಯಾಕ್ಟರೀ ಸಹ ಸೇರಿಕೊಂಡಿದೆ.

pushpaka248 ದಿವಸಗಳ ಕಾಲ ಬೆಂಗಳೂರು, ಮಂಗಳೂರು ಸ್ಥಳಗಳಲ್ಲಿ ಚೊಚ್ಚಲ ಸಿನಿಮಾ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಎಸ್ ರವೀಂದ್ರನಾಥ್. ಸ್ಥಿರ ಚಿತ್ರಗಳಲ್ಲಿ
ನಿಪುಣ ಭುವನ್ ಗೌಡ ಅವರ ಛಾಯಾಗ್ರಹಣದ ಜನಪ್ರಿಯತೆ ಈಗಾಗಲೇ ಈ ಚಿತ್ರದ ಟ್ರೈಲರ್ ಇಂದ ವ್ಯಕ್ತ ಆಗಿದ್ದು ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇದು ಜನಪ್ರಿಯ ನಟ ರಮೇಶ್ ಅರವಿಂದ್ ಅವರ 100ನೇ ಕನ್ನಡ ಚಿತ್ರ. ಇವರ ಜೊತೆ ಪುಟ್ಟ ಮಗಳಾಗಿ ಬಾಲ ಕಲಾವಿದೆ ಯುವಿನ ಪಾರ್ಥವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುಪ್ರಸಿದ್ದ ನಟಿಯರಾದ ಜುಹಿ ಚಾವ್ಲ ಕನ್ನಡ ಚಿತ್ರವೊಂದಕ್ಕೆ ಎರಡೂವರೆ ದಶಕಗಳ ನಂತರ ಆಗಮಿಸಿದ್ದಾರೆ ಹಾಗೂ ಜನಪ್ರಿಯ ನಟಿ ರಚಿತ ರಾಮ್ ಅಲ್ಲದೆ ರವಿ ಕಾಳೆ, ಮನದೀಪ್ ರಾಯ್ ತಾರಾಗಣದಲ್ಲಿ ಇದ್ದಾರೆ.

‘ಪುಷ್ಪಕ ವಿಮಾನ’ ಸಂಕಲನಕಾರರು ಸುರೇಶ್. ಚರಣ್ ರಾಜ್ ಈ ಚಿತ್ರಕ್ಕೆ ಹಾಡುಗಳ ಸಂಯೋಜನೆ ಹಾಗೂ ಹಿನ್ನಲೆ ಸಂಗೀತ ಒದಗಿಸುತ್ತಿದ್ದಾರೆ.

 

 

Add Comment