Quantcast

ನವಕರ್ನಾಟಕದಲ್ಲಿ ‘ಮುಂಗಾರು ಮಳೆ’ ಗಣೇಶ್

ಅರುಣ್ ಕುಮಾರ್ 

ಸಿನಿಮಾ ನಟರಿಗೆ ಓದೋ ಅಭ್ಯಾಸವೇ ಇಲ್ಲ ಅನ್ನೋ ಆರೋಪವಿದೆ…

ಪ್ರಕಾಶ್ ರೈ, ಕಿಶೋರ್, ವಿಜಯ ರಾಘವೇಂದ್ರರಂಥ ಕೆಲವರಿಗೆ ಪುಸ್ತಕದ ಗೀಳಿದೆ.

ದುನಿಯಾ ವಿಜಯ್ ಕೂಡಾ ಓದಿನ ಹುಚ್ಚು ಹತ್ತಿಸಿಕೊಂಡಿರೋದರ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದರು.

ಆದರೆ, ಮುಂಗಾರು ಮಳೆಯ ಹೀರೋ ಗಣೇಶ್ ಕೂಡಾ ಪುಸ್ತಕಗಳನ್ನು ಓದುವ ಅಭ್ಯಾಸವಿಟ್ಟುಕೊಂಡಿದ್ದಾರೆ ಅಂತಾ ಗೊತ್ತಾಗಿದ್ದು ಇವತ್ತು ಕೆ.ಜಿ. ರಸ್ತೆಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಕನ್ನಡಪ್ರಭ ಸಿನಿಮಾ ವರದಿಗಾರ, ಗೆಳೆಯ ಕೇಶವಮೂರ್ತಿ ಜೊತೆಗೆ ಅವರೆದುರಾದಾಗಲೇ…

ಹಾಗೆ ಅಚಾನಕ್ಕಾಗಿ ಸಿಕ್ಕಿದ್ದು ಮಾತ್ರವಲ್ಲದೆ, ಈ ‘ಐದು ಪೈಸೆ ವರದಕ್ಷಿಣೆಯನ್ನು ಕೊಡಿಸಿದ್ದು ಅವರೇ…

Add Comment