Quantcast

ನಿಮ್ಮಿ ಬಾಯಲ್ಲಿ ಏನೇನೋ ಹೇಳಿಸ್ತಿಯಾ..

ಪ್ರತಿಭಾ ನಂದಕುಮಾರ್ 

ಒಂದು ಸಲ ನಾನು ಲಂಕೇಶ್ ಪತ್ರಿಕೆಯಲ್ಲಿ ನಿಮ್ಮಿಕಾಲಂ ಬರಿತಿದ್ದಾಗ ನಿಮ್ಮಿ ಬಾಯಲ್ಲಿ “ಸ್ಯಾನಿಟರಿ ಪ್ಯಾಡ್ ಕಳೆದ ಶತಮಾನದ ಅತ್ಯದ್ಭುತ ಡಿಸ್ಕವರಿ. ಅದು ಮಹಿಳೆಯರಿಗೆ ಕೊಟ್ಟ ಸ್ವಾತಂತ್ರ್ಯ ಬೇರೆ ಯಾವುದೂ ಕೊಡಲಿಲ್ಲ ” ಅಂತ ಹೇಳಿಸಿದ್ದೆ.

ಲಂಕೇಶ್ ಅದನ್ನು ಓದಿ… ಥು ನೀನು ನಿಮ್ಮಿ ಬಾಯಲ್ಲಿ ಏನೇನೋ ಹೇಳಿಸ್ತಿಯಾ ಅಂದ್ರು.

ನಾನಂದೆ “ಆ ಮಾತು ತಪ್ಪು ಅಂತ ನಿಮಗೆ ಅನ್ನಿಸಿದರೆ ಅದನ್ನ ಡಿಲೀಟ್ ಮಾಡಿ.”

ಅವರು ಹಾಗೇ ಪ್ರಕಟಿಸಿದರು.

ಸ್ಯಾನಿಟರಿ ಪ್ಯಾಡ್ ಚರ್ಚಿಸಬೇಕಾದ ವಿಷಯವೇ ಅಲ್ಲ. ಅದು ಹೆಣ್ಣಿಗೆ ಉಸಿರಾಟದಷ್ಟೇ ಅಗತ್ಯವಾದ ವಸ್ತು.

ನಮ್ಮ ಹಿಂದಿನ ತಲೆಮಾರಿನವರನ್ನು ಐದು ದಿನ ಬಂಧಿಸಿಡುತ್ತಿದ್ದುದೆ ಆಗ ಸ್ಯಾನಿಟರಿ ಪ್ಯಾಡ್ ಇರಲಿಲ್ಲ ಅನ್ನುವ ಕಾರಣಕ್ಕೆ.

2 Comments

  1. chi hally kirana
    July 11, 2017
  2. Anonymous
    July 11, 2017

Add Comment

Leave a Reply to Anonymous Cancel reply