Quantcast

‘ಕತ್ತಲೆಕಾನು’ ಬೆಳಕಿಗೆ ಬಂತು

ಸಿದ್ದಾಪುರ (ಉತ್ತರಕನ್ನಡ)ದ ಲಯನ್ಸ ಬಾಲಭವನದಲ್ಲಿ  ಗಂಗಾಧರ ಕೊಳಗಿಯವರ ‘ಕತ್ತಲೆಕಾನು’ ಕಾದಂಬರಿ ಬಿಡುಗಡೆ ಕಾರ್ಯಕ್ರಮ.
ಸಾಹಿತಿ ಶ್ರೀಧರ ಬಳಗಾರ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಪುಸ್ತಕ ಪರಿಚಯಿಸಿದರು. ಗಂಗಾಧರ ಕೊಳಗಿ ಉಪಸ್ಥಿತರಿದ್ದರು.

Add Comment