Quantcast

‘ಶತಮಕ೯ಟ’ ವಿಜಯನಗರ ಬಿಂಬದಲ್ಲಿ

ಶತಮಕ೯ಟ ನಾಟಕದ ಬಗ್ಗೆ

ಫ್ರೆಂಚ್ ನಾಟಕಕಾರ ಮೋಲಿಯರ್ ನ ‘ಬೂರ್ಜ್ವಾ ದಿ ಜಂಟಲ್ಮನ್’ ಎನ್ನುವ ನಾಟಕದ ಕನ್ನಡ ರೂಪಾಂತರ ‘ಶತಮಕ೯ಟ’

ಈ ನಾಟಕವು ಸ್ವತಂತ್ರ ಪೂವ೯ದ ಕಥೆ.

ಐನಾತಿಪುರದ ಜಮೀನುದಾರ ಮೈಲಾರಿ ಕ್ಯಾತೆ ನಿಂಗ ಬ್ರಿಟೀಷ್ ಸರಕಾರ ಕೊಡಮಾಡುತ್ತಿದ್ದ ‘ಆಡ೯ಲೀ೯ ಆಫ್ ಬ್ರಿಟೀಷ್ ಎಂಪೈರ್’ ಎನ್ನುವ ಬಿರುದನ್ನು ಪಡೆಯಲು ಪಡುವ ಪಾಡು ನಾಟಕದ ತಿರುಳು.

ಅನ್ನದಾತುರಕ್ಕಿಂತ ಚಿನ್ನದ ಆತುರ ದೊಡ್ಡದು. ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು ತೀಕ್ಷ್ಣ. ಮನ್ನಣೆಯ ದಾಹ ಎಲ್ಲಕ್ಕೂ ದೊಡ್ಡದು ಎನ್ನುವ ಕವಿವಾಣಿಯಂತೆ  ಮನ್ನಣೆಯ ದಾಹಕ್ಕೆ ಬಿದ್ದ ಮೈಲಾರಿ ಕ್ಯಾತೆ ಲಿಂಗನ ಕಥೆ ಇದು.

ಸಾಹೇಬ ಎನ್ನಿಸಿಕೊಳ್ಳಬೇಕು ಎನ್ನುವ ಹಂಬಲದ ಕ್ಯಾತೆ ಲಿಂಗ ಒಂದೆಡೆಯಾದರೆ ಗಾಂಧಿ ತತ್ವಗಳನ್ನೆ ಉಸಿರು ಮಾಡಿಕೊಂಡಿರುವ ಸತ್ಯಾಗ್ರಹಿ ಶೀನಪ್ಪ ಮತ್ತೊಂದೆಡೆ. ಇವರಿಬ್ಬರ ವಿಚಾರ ವೈಪರೀತ್ಯಕ್ಕೆ ಸಿಕ್ಕ ರತ್ನಮತ್ತು ಮೋಹನ ದಾಸರದ್ದು ಮುಗ್ಧ ನಿರ್ಮಲ ಪ್ರೇಮ. ಮನೆಯೊಡತಿ ಗೌರಮ್ಮ, ಹಿರಿಯ ಅಜ್ಜಮ್ಮ, ಕೆಲಸದಾಕೆ ಲಚ್ಚಿ ಒಂದೆಡೆಯಾದರೆ ಮತ್ತೊಂದೆಡೆ ಕ್ಯಾತೆಲಿಂಗನನ್ನು ದೋಚುವ ದೊಡ್ಡ ದಂಡೇ ಇದೆ.

ಮುಗ್ಧ ಪ್ರೇಮಿಗಳು ಒಂದಾದರೆ?

ಕ್ಯಾತೆ ಕಂಡ ಕನಸು ನನಸಾಯಿತೆ?

ಮು೦ತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನೋಡಿ ವಿಜಯನಗರ ಬಿಂಬ ಹಿರಿಯರ ವಿಭಾಗ ಅಪಿ೯ಸುವ ನಾಟಕ ಶತಮಕ೯ಟ

ಆಗಸ್ಟ್ 6,2017 ಭಾನುವಾರ
ಸಂಜೆ 7ಕ್ಕೆ
ವಿಜಯನಗರ ಬಿಂಬ ದ ಸರಳಾಂಗಣ ದಲ್ಲಿ
ಪ್ರವೇಶ ರೂ100/-
ಸಂಪರ್ಕ 080- 23300967

Add Comment