Quantcast

ಇಂಗ್ಲಿಷ್ ಕಲಿಕೆ: ಕೋರ್ಟ್ ತೀರ್ಪಿನ ಸುತ್ತ

ಗಾಳಿಬೆಳಕು

ನಟರಾಜ ಹುಳಿಯಾರ್

ಈ ಬಾರಿ ಮೂರು ಟಿಪ್ಪಣಿಗಳು

———————————————————————–

ತಾವು ಮಾತ್ರ ಕನ್ನಡಪರ ಎಂದು ವಿಜೃಂಭಿಸಿಕೊಳ್ಳುವ ಬುದ್ಧಿಜೀವಿಗಳು ಹಳ್ಳಿಮಕ್ಕಳು ಇಂಗ್ಲಿಷ್ ಕಲಿಯದಿರುವಂತೆೆ ಮಾಡಲು ಅವತ್ತು ಹೂಡಿದ ತರ್ಕ, ಕುತರ್ಕಗಳು ಕನ್ನಡ ಸಂಸ್ಕೃತಿಯ ಚರಿತ್ರೆಯಲ್ಲಿ ಅತ್ಯಂತ ಹೀನವಾದ ಗುರುತುಗಳಾಗಿ ಉಳಿಯಲಿವೆ ಎಂದಷ್ಟೆ ಈ ಸಂದರ್ಭದಲ್ಲಿ ಹೇಳಿದರೆ ಸಾಕು.

——————————————————————————–

ಇಂಗ್ಲಿಷ್ ಕಲಿಕೆ: ಕೋರ್ಟ್ ತೀರ್ಪಿನ ಸುತ್ತ  

ಧರಂಸಿಂಗ್ ಸಕರ್ಾರ ಇದ್ದಾಗ ದಲಿತ, ರೈತಸಂಘಟನೆಗಳ ಜೊತೆಗೆ ಪ್ರಗತಿಪರ ಚಿಂತಕರು ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರು ಸಕರ್ಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿ ಎಂದು ಬೇಡಿಕೆ ಮಂಡಿಸಿದರು. ಮಾವಳ್ಳಿಶಂಕರ್, ಇಂದೂಧರಹೊನ್ನಾಪುರ, ಕೋಡಿಹಳ್ಳಿಚಂದ್ರಶೇಖರ್, ಎಂ.ವೆಂಕಟಸ್ವಾಮಿ, ಸಿ.ಜಿ.ಕೆ, ಕಿರಂ. ನಾಗರಾಜ್, ಲಕ್ಷ್ಮೀನಾರಾಯಣನಾಗವಾರ ಮುಂತಾದ ನಾಯಕರ ಮುಂಚೂಣಿಯಲ್ಲಿ ಈ ಬೇಡಿಕೆ ಕೆಲಕಾಲ ಚಳುವಳಿಯ ರೂಪವನ್ನೂ ಪಡೆಯಿತು.


ಆಗ ಎಂ.ಚಿದಾನಂದಮೂತರ್ಿ, ಜಿ.ಎಸ್.ಶಿವರುದ್ರಪ್ಪ, ಚಂದ್ರಶೇಖರಪಾಟೀಲ ಮುಂತಾದ ಹಿರಿಯ ಲೇಖಕರು ಭಾಷಾಮಾಧ್ಯಮದ ಕುರಿತು ತೀಪರ್ು ಬರುವವರೆಗೂ ಕಾಯಿರಿ ಎಂದು ತಾವೇ ಕೋಟರ್ಿನ ತೀಪರ್ು ಬರೆಯಲಿರುವವರಂತೆ ಬುದ್ಧಿವಾದ ಹೇಳುತ್ತಾ, ಹಳ್ಳಿಮಕ್ಕಳ ಇಂಗ್ಲಿಷ್ ಕಲಿಕೆಯ ಸಾಧ್ಯತೆಯನ್ನು ಹಿಂದೂಡಲೆತ್ನಿಸುತ್ತಿದ್ದರು. ಆದರೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಮೇಲೆ ಸಕರ್ಾರಿ ಶಾಲೆಗಳಲ್ಲೂ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸುವ ತೀಮರ್ಾನ ಕೈಗೊಂಡರು. ಇದೀಗ ಕೋಟರ್್ ಅದನ್ನು ಒಪ್ಪಿದಂತಾಗಿದೆ.
ತಾವು ಮಾತ್ರ ಕನ್ನಡಪರ ಎಂದು ವಿಜೃಂಭಿಸಿಕೊಳ್ಳುವ ಬುದ್ಧಿಜೀವಿಗಳು ಹಳ್ಳಿಮಕ್ಕಳು ಇಂಗ್ಲಿಷ್ ಕಲಿಯದಿರುವಂತೆೆ ಮಾಡಲು ಅವತ್ತು ಹೂಡಿದ ತರ್ಕ, ಕುತರ್ಕಗಳು ಕನ್ನಡ ಸಂಸ್ಕೃತಿಯ ಚರಿತ್ರೆಯಲ್ಲಿ ಅತ್ಯಂತ ಹೀನವಾದ ಗುರುತುಗಳಾಗಿ ಉಳಿಯಲಿವೆ ಎಂದಷ್ಟೆ ಈ ಸಂದರ್ಭದಲ್ಲಿ ಹೇಳಿದರೆ ಸಾಕು.


ಆದರೆ ತಂತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಅತ್ಯುತ್ತಮ ಶಾಲೆಗಳಿಗೆ ಕಳಿಸಿ ಇವತ್ತು ಈ ತೀಪರ್ಿನ ಬಗ್ಗೆ ಸಾರ್ವಜನಿಕವಾಗಿ ಗೊಣಗುತ್ತಿರುವವರ ಹಿಪೋಕ್ರೆಸಿ ಅತ್ಯಂತ ಕರುಣಾಜನಕವಾಗಿದೆ ಎಂಬುದನ್ನು ಮಾತ್ರ ಹೇಳಲೇಬೇಕು.
ಈ ನಡುವೆ ಕೂಡ, ಈ ತೀಪರ್ಿನ ನಂತರ ಖಾಸಗಿ ಶಾಲೆಗಳು ಬೇಕಾಬಿಟ್ಟಿ ನಿಧರ್ಾರ ತೆಗೆದುಕೊಳ್ಳಬಹುದು ಎಂಬ ಬಗ್ಗೆ ನಮ್ಮ ಸಾಹಿತಿಗಳು ವ್ಯಕ್ತಪಡಿಸುತ್ತಿರುವ ಆತಂಕ ಅತ್ಯಂತ ಪ್ರಾಮಾಣಿಕವಾದುದು ಎಂಬ ಸತ್ಯವನ್ನಂತೂ  ಒಪ್ಪಿಕೊಳ್ಳಲೇಬೇಕು.

ನಾವು ಓದುವ ಶಿಥಿಲ ರೀತಿಗಳು

ನಮ್ಮ ವಿಮಶರ್ಾಕ್ರಮಗಳು, ಓದುವ ರೀತಿಗಳು ಎಷ್ಟೊಂದು ತೆಳುವಾದ ನೆಲೆಗಟ್ಟಿನ ಮೇಲೆ ನಿಂತಿರುತ್ತವೆ ಎನ್ನಿಸುವುದು ಇಂಥ ಸಂದರ್ಭಗಳಲ್ಲಿ:
ಮಹಾತ್ಮಾ ಗಾಂಧೀಜಿ ಕ್ರೂರಿಯೊಬ್ಬನ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ ಹೇರಾಮ್ ಎಂದರು ಎಂಬುದು ಜನಪ್ರಿಯ ನಂಬಿಕೆಯಷ್ಟೆ? ತಮ್ಮ ಭಾಷಣವೊಂದರಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಾಹಿತ್ಯ ವಿಮರ್ಶಕರೊಬ್ಬರು ಈ ಮಾತನ್ನು ಬೇರೆ ಯಾವುದಕ್ಕೋ ಕನೆಕ್ಟ್ ಮಾಡುತ್ತಿದ್ದರು. ನೋಡಿ, ಇವತ್ತು ರಾಮ ಭಯದ ಪ್ರತೀಕವಾಗಿದ್ದಾನೆ. ಗಾಂಧಿ ರಾಮನ ಹೆಸರು ಹೇಳಿದರು ಎಂಬುದನ್ನು ನೆನೆಸಿಕೊಂಡರೆ ಗಾಂಧಿಯನ್ನು ಒಪ್ಪುವುದು ಕಷ್ಟವಾಗುತ್ತದೆ… ಎಂಬರ್ಥದ ಮಾತನ್ನು ಅವರು ಹೇಳುತ್ತಿದ್ದರು.


ಈ ಗ್ರಹಿಕೆಯಲ್ಲಿ ಒಂದು ಮೂಲಭೂತ ದೋಷವಿದೆ. ಅದೇನೆಂದರೆ ಒಂದು ಭಾಷೆಯನ್ನು ಬಳಸುವ ಜನ ಇನ್ಷಾಅಲ್ಲಾಹ್ ಓ ಗಾಡ್ ದೇವರೇ ದೇವರಾಣೆ ಎಂದಾಗ ಅವರು ದೇವರನ್ನೇ ನೆನೆಯುತ್ತಾರೆ ಎಂದರ್ಥವಲ್ಲ. ಅಕಸ್ಮಾತ್ ಹಾಗೆ ನೆನೆದರೆ ಅದು ಅವರ ನಂಬಿಕೆಯ ಲೋಕದ ಒಂದು ಭಾಗ… ಹಾಗೆಯೇ ನಾಸ್ತಿಕರು ಓ ಗಾಡ್ ಎಂಬ ಪದ ಬಳಸಿದಾಗ ಅದು ಅವರ ಗುಪ್ತದೈವಭಕ್ತಿಯ ಸೂಚಕ ಎನ್ನುವ ಪತ್ತೇದಾರರಿದ್ದಾರೆ! ಅದು ಕೂಡ ಅಷ್ಟು ಸರಿಯಲ್ಲ. ಯಾಕೆಂದರೆ ಒಂದು ಭಾಷೆಯ ನುಡಿಗಟ್ಟನ್ನು, ಉಕ್ತಿಯನ್ನು ನಾಸ್ತಿಕರೂ ಕೂಡ ಅರಿವಿಲ್ಲದೆಯೇ ಬಳಸುತ್ತಿರಬಹುದು…
ಅದೇನೇ ಇರಲಿ, ಈ ಟಿಪ್ಪಣಿಯ ಶುರುವಿನಲ್ಲಿ ಪ್ರಸ್ತಾಪಿಸಿದ ಗಾಂಧೀಜಿ ಹೇರಾಮ್ ಎಂದದ್ದರ ಬಗೆಗಿನ ವಿಮರ್ಶಕರೊಬ್ಬರ ವಿಶ್ಲೇಷಣೆಯನ್ನು ನಾನು ಕೇಳಿಸಿಕೊಂಡ ಎರಡೇ ದಿನಕ್ಕೆ ಗಾಂಧೀಜಿ ಸಾಯುವಾಗ ಅವರ ಜೊತೆಯಲ್ಲಿದ್ದ ಮಹಿಳೆಯೊಬ್ಬರು, `ಗಾಂಧಿ ಅವತ್ತು ಹೇರಾಮ್ ಎನ್ನಲಿಲ್ಲ ಎಂಬ ಹೇಳಿಕೆ ನೀಡಿದರು. ಈ ಹೇಳಿಕೆ ಬಂದದ್ದು 2006ನೇ ಇಸವಿಯ ಜನವರಿ-ಫೆಬ್ರವರಿ ತಿಂಗಳಲ್ಲಿ ಎಂದು ನನ್ನ ನೆನಪು…

ಅವರ ಈ ಹೇಳಿಕೆಯನ್ನು ಓದಿದಾಗ ಹೇರಾಮ್ ಸುತ್ತ ನಾವು ಕಟ್ಟಿಕೊಂಡ ಆರಾಧನೆ ಹಾಗೂ ಅದನ್ನಾಧರಿಸಿದ ವಿಶ್ಲೇಷಣೆ ಎಷ್ಟು ಶಿಥಿಲ ಎನಿಸುತ್ತದೆ. ಹಾಗೆಯೇ ಗಾಂಧೀಜಿಯ ಹೇರಾಮ್ ಉದ್ಗಾರವನ್ನು ಮತೀಯವಾದಿಗಳು ಬಿಂಬಿಸುವ ರಾಮನಿಗೆ ಕನೆಕ್ಟ್ ಮಾಡಿ ಮಾತಾಡುವುದು ಕೂಡ ಅಷ್ಟೇ ಶಿಥಿಲ ಎನಿಸುತ್ತದೆ.

ನಮ್ಮ ವಿಮಶರ್ೆಯಲ್ಲಿ ಕೂಡ ಸಂದರ್ಭವನ್ನೇ ಹೆಚ್ಚು ಗಮನದಲ್ಲಿಟ್ಟುಕೊಂಡು ಮಾಡುವ ವಿಶ್ಲೇಷಣೆಗಳು ಅನೇಕ ಸಲ ತೀರಾ ತೆಳು ಅನಿಸುವುದು ಈ ಕಾರಣಕ್ಕಾಗಿಯೇ. ಇದು ವಸಾಹತುಶಾಹಿ ಕಾಲದಲ್ಲಿ ಹುಟ್ಟಿದ ಪದ್ಯವಾದ್ದರಿಂದ ಈ ರೂಪಕ ಹುಟ್ಟಿದೆ ಎನ್ನುವುದು ಅಥವಾ ಗಾಂಧೀಯಗದ ಪ್ರಭಾವದಿಂದಾಗಿ ಈ ಬಗೆಯ ಕತೆ ಹುಟ್ಟಿದೆ ಎಂದು ತೀಮರ್ಾನಿಸುವುದು ಕೂಡ ಆತುರದ ಓದಾಗುತ್ತದೆ. ಆದ್ದರಿಂದಲೇ ನಮ್ಮ ಎದುರಿಗಿನ ಪಠ್ಯವನ್ನು ಹತ್ತಿರದಿಂದ ಹಾಗೂ ಆಳವಾಗಿ ಓದುವುದು ಹೆಚ್ಚು ಉಪಯುಕ್ತ ಎನ್ನಿಸುವುದು. ಆದರೆ ಇದು ಕೂಡ ಅಂತಿಮ ಓದೇನಲ್ಲ. ಆ ಮಾತು ಬೇರೆ.

ವ್ಯಕ್ತಿವಾದ: ಈ ಕಾಲದಲ್ಲಿ…

ಸಾಮಾನ್ಯವಾಗಿ ಬಂಡಾಯ ಸಾಹಿತಿಗಳು ಹಾಗೂ ದಲಿತ ಸಾಹಿತಿಗಳು ನವ್ಯ ಸಾಹಿತ್ಯವನ್ನು ಚಚರ್ಿಸುವಾಗ ನವ್ಯರು `ವ್ಯಕ್ತಿವಾದಿಗಳು ಎನ್ನುತ್ತಿರುತ್ತಾರೆ. ಅನೇಕ ಎಳೆಯರೂ ಈ ಮಾತನ್ನು ಕಣ್ಣು ಮುಚ್ಚಿಕೊಂಡು ಗಿಳಿಪಾಠ ಒಪ್ಪಿಸುತ್ತಿರುತ್ತಾರೆ… ವ್ಯಕ್ತಿಯ ನೈತಿಕ ನಿಕಷದ ಮೂಲಕ ಸಮಾಜವನ್ನು ಪ್ರಶ್ನಿಸುವ, ಸಾಂಪ್ರದಾಯಿಕ ಸಮಾಜದ ವಿರುದ್ಧ, ಅಥವಾ ವ್ಯಕ್ತಿಗಳ ಗೋಸುಂಬೆತನದ ವಿರುದ್ಧ ಬಂಡೇಳುವ ಸೂಕ್ಷ್ಮವ್ಯಕ್ತಿಗಳನ್ನು ನವ್ಯ ಸಾಹಿತ್ಯ ಸೃಷ್ಟಿಸಿದೆಯಷ್ಟೆ? ಅದನ್ನು ಸರಿಯಾಗಿ ಓದದ ಸಾಮಾಜಿಕ ವಿಮರ್ಶಕರು ನವ್ಯ ಸಾಹಿತಿಗಳನ್ನು ಕೇವಲ ವ್ಯಕ್ತಿವಾದಿ ಎಂದು ನೆಗೆಟಿವ್ ಆಗಿ ಓದುತ್ತಿರುತ್ತಾರೆ.

ಕೇವಲ ಸಾಹಿತ್ಯದಲ್ಲಷ್ಟೇ ಅಲ್ಲ, ಸಾಮಾನ್ಯ ಸನಿವೇಶಗಳಲ್ಲಿ ಕೂಡ ವ್ಯಕ್ತಿವಾದಿ ಎಂದು ಯಾರಾದರೂ ಒಬ್ಬರನ್ನು ಬ್ರ್ಯಾಂಡ್ ಮಾಡಿದ ತಕ್ಷಣ, ನಾವು ನಿಜಕ್ಕೂ ಸೂಕ್ಷ್ಮವಾಗಿದ್ದರೆ ಯಾರು ವ್ಯಕ್ತಿವಾದಿಯಲ್ಲ ಎಂಬ ಪ್ರಶ್ನೆ ಬರುತ್ತದೆ: ತಾನೇ ಅಕಾಡೆಮಿಯ ಅಧ್ಯಕ್ಷನಾಗಬೇಕು, ಉಳಿದವರು ಆಗಬಾರದು ಎಂದು ಮಂತ್ರಿಗಳ ಮನೆ ಬಾಗಿಲು ಕಾಯುವ ಬಂಡಾಯ ಸಾಹಿತಿ ವ್ಯಕ್ತಿವಾದಿಯಲ್ಲವೇ?! ತನ್ನ ಯಾವುದೋ ಪುಸ್ತಕವನ್ನು ಟೀಕಿಸಿದ ಮಾಕ್ಸರ್್ವಾದಿ ವಿಮರ್ಶಕನ ವಿರುದ್ಧ ಜೀವಮಾನ ಪರ್ಯಂತ ಕತ್ತಿಮಸೆಯುವ ದಲಿತ ಸಾಹಿತಿ ವ್ಯಕ್ತಿವಾದಿಯಲ್ಲವೇ? ನನಗೆ ಈ ಸಭೆಯಲ್ಲಿ ಮಾತಾಡಲು ಅವಕಾಶ ಕೊಡದೆ ಅವಮಾನ ಮಾಡಿದ್ದೀರಾ? ನೋಡ್ತಾ ಇರಿ, ನಿಮ್ಮ ಸಂಘಟನೆಯನ್ನು ಚೂರು ಚೂರು ಮಾಡ್ತೀನಿ ಎಂದು ಗುಡುಗುವ ಕಮ್ಯೂನಿಷ್ಟ್ ನಾಯಕ ವ್ಯಕ್ತಿವಾದಿಯಲ್ಲವೇ? ತನಗೆ ಮಂತ್ರಿ ಪದವಿ ಕೊಡದಿದ್ದರೆ ಪಕ್ಷವನ್ನೇ ನಾಶ ಮಾಡುತ್ತೇನೆ ಎನ್ನುವ ಶಾಸಕ ವ್ಯಕ್ತಿವಾದಿಯಲ್ಲದೆ ಇನ್ನೇನು?
ಅಷ್ಟೇ ಯಾಕೆ? ದಿನನಿತ್ಯ ದೇವರನ್ನು ಆರಾಧಿಸುವ ಜನ ಏನು ಬೇಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ನೋಡಿ: ಅವರೆಲ್ಲ ತಾನು, ತನ್ನ ಮಕ್ಕಳು ಉದ್ಧಾರವಾಗಬೇಕು ಎಂದು ಬೇಡಿಕೊಳ್ಳುತ್ತಿದ್ದಾರೆ ಅಷ್ಟೆ.. ವ್ಯಾಪಾರಿಯೊಬ್ಬ ವ್ಯಕ್ತಿವಾದಿಯೋ, ಸಮಷ್ಟಿವಾದಿಯೋ? ತಾನು ಇಷ್ಟು ಬರೆದರೂ ರೆಕಗ್ನಿಷನ್ ಸಿಗಲಿಲ್ಲ, ಅವಾಡರ್್ ಸಿಗಲಿಲ್ಲ ಎಂದು ಕೊರಗುವ ಸಮಾಜವಾದಿ ಲೇಖಕ ವ್ಯಕ್ತಿವಾದಿಯೋ, ಸಮಾಜವಾದಿಯೋ? ತನಗೆ ವಿಧೇಯನಾಗಿರದ, ತನ್ನ ನಿಲುವುಗಳನ್ನು ಪ್ರಶ್ನಿಸಿದ ವಿದ್ಯಾಥರ್ಿಗೆ ಕಿರುಕುಳ ಕೊಡುವ ಮೇಷ್ಟ್ರು ಕೂಡ ವ್ಯಕ್ತಿವಾದಿ ತಾನೆ! ಅಷ್ಟೇ ಅಲ್ಲ, ತನ್ನ, ಅಂದರೆ ವ್ಯಕ್ತಿಯ, ಮೋಕ್ಷವೇ ಅಂತಿಮ ಎನ್ನುವ ಹಿಂದೂ ಧರ್ಮದ ನಂಬಿಕೆಯೇ ಮೂಲತಃ ವ್ಯಕ್ತಿವಾದಿಯಲ್ಲವೆ?

ವ್ಯಕ್ತಿವಾದ, ವ್ಯಕ್ತಿವಿಶಿಷ್ಟತಾವಾದ ಮುಂತಾದ ಪರಿಕಲ್ಪನೆಗಳನ್ನು ವ್ಯಕ್ತಿಕೇಂದ್ರಿತ ವ್ಯಸನ ಎಂದು ನೋಡುವ ಹಾಗೆಯೇ ಒಂದು ಸವರ್ಾಧಿಕಾರಿ ಸಮೂಹ ಅಥವಾ ಸವರ್ಾಧಿಕಾರಿ ಸಮಾಜದ ವಿರುದ್ಧ ವ್ಯಕ್ತಿಯ ತೀವ್ರ ನೈತಿಕ ಪ್ರತಿಭಟನೆಯ ಭಾಗವಾಗಿಯೂ ನೋಡುವ ಸಾಧ್ಯತೆ ಇದೆ. ಆದರೆ ಕನ್ನಡ ಚಿಂತನೆಯಲ್ಲಿ ಈಚಿನ ಹತ್ತಾರು ವರ್ಷಗಳಲ್ಲಿ ನವ್ಯ ಸಾಹಿತ್ಯವನ್ನು ಟೀಕಿಸುವ ಸಾಧನವಾಗಿ ಮಾತ್ರ ವ್ಯಕ್ತಿವಾದ ಎಂಬ ಶಬ್ದವನ್ನು ಹೆಚ್ಚು ಬಳಸುತ್ತಿರುವುದರಿಂದ ಈ ಲಹರಿ ರೂಪದ ಟಿಪ್ಪಣಿ.

One Response

  1. siddamukhi
    July 7, 2008

Add Comment