Quantcast

ಕೊಲಂಬಿಯಾದಲ್ಲಿ ಮಮತಾ ಜಿ ಸಾಗರ

ಕವಯತ್ರಿ ಮಮತಾ ಜಿ ಸಾಗರ ಕವಿತೆ ಎಂಬ ದೋಣಿಯನೇರಿ ಕೊಲಂಬಿಯಾ ಮುಟ್ಟಿದ್ದಾರೆ . ಕೊಲಂಬಿಯಾದಲ್ಲಿ ಈ ೫ ರಿಂದ ೧೨ ರವರೆಗೆ ಜರುಗುತ್ತಿರುವ ೧೮ ನೆಯ ಅಂತಾರಾಷ್ಟ್ರೀಯ ಕವಿತಾ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ.

‘ಕಾಡ ನವಿಲಿನ ಹೆಜ್ಜೆ’ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ಕಾಲಿಟ್ಟ ಮಮತಾ ನಂತರ ‘ನದಿಯ ನೀರಿನ ತೇವ’ ಹಾಗೂ ಐದು ನಾಟಕಗಳನ್ನು ಬರೆದಿದ್ದಾರೆ.

ಕೊಲಂಬಿಯಾದ ಮೆಡಲಿನ್ ನಲ್ಲಿ ಜರುಗುವ ಕಾವ್ಯ ಉತ್ಸವ ಜಗದ ಎಲ್ಲರ ಗಮನ ಸೆಳೆಯುವ ಉತ್ಸವ. ಈ ಉತ್ಸವ ಮಮತಾರಿಗೆ ಇನ್ನಷ್ಟು ಬರೆಯುವ ಉತ್ಸಾಹ ನೀಡಲಿ.

One Response

  1. Omkar Hosalli
    May 31, 2015

Add Comment