ಸಂದರ್ಶನ:ಸುಘೋಷ್ ಎಸ್ ನಿಗಳೆ

ಚಿತ್ರ- ಅರುಣ ಭಟ್

(ಪುನರವಲೋಕನ ಗ್ರಂಥದಿಂದ)

ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಮಗುವಿಗೂ ಒಳ್ಳೆ ವಿದ್ಯಾಭ್ಯಾಸ, ಆರೋಗ್ಯ, ಊಟ, ಔಷದಿ  ಒದಗಿಸಬಹುದೆಂಬ ಯೋಚನೆ ಮಾಡಬೇಕು.ಆ ಗುರಿ ಮುಟ್ಟಿದರೆ ವಿಶ್ವ ಕನ್ನಡ ಸಮ್ಮೇಳನ

ಮಾಡಿದ್ದಕ್ಕೂ ಸಾರ್ಥಕವೆನಿಸುತ್ತದೆ.

 • ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾಗಿದ್ದಕ್ಕೆ ಶುಭಾಶಯಗಳು. ಈ ಗೌರವಕ್ಕೆ ನಿಮ್ಮಪ್ರತಿಕ್ರಿಯೆ..
 • ತುಂಬಾ ಸಂತೋಷವಾಗಿದೆ. ಮುಖ್ಯಮಂತ್ರಿಗಳು ನನ್ನನ್ನು ಸಂಪರ್ಕಿಸಿ ನಾನು ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕೆಂಬ ಅಪೇಕ್ಷೆ  ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಹಲವು ರಂಗಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಮ್ಮೇಳನ ಕನ್ನಡಿಗರ ಪ್ರತಿಭೆ ಹಾಗೂ ಪ್ರಗತಿಯನ್ನು ಬಿಂಬಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಅವರು ನಮ್ಮ ರಾಜ್ಯದ ಮೊದಲ ಪ್ರಜೆ. ಅವರು ಕರೆದರೆ ಒಪ್ಪಿಕೊಳ್ಳುವುದು ನನ್ನ ಕರ್ತವ್ಯ. ಈ ರೀತಿಯ ಅವಕಾಶಸಿಕ್ಕಿದ್ದಕ್ಕೆ ಸಂತೋಷವಾಗಿದೆ.
 • ವಿಶ್ವ ಕನ್ನಡ ಸಮ್ಮೇಳನಕ್ಕೆ ತಮ್ಮ ಸಂದೇಶ..
 • ಕರ್ನಾಟಕಕ್ಕೆ ವಿಶೇಷ ಚರಿತ್ರೆಯಿದೆ. ನಮ್ಮ ಭಾಷೆ ಇ ಕ್ರಿ. ಶ. 400 ರಿಂದಲೂ ಹಲವು ರೀತಿಯಲ್ಲಿ ಬೆಳೆಯುತ್ತಾ ಬಂದಿದೆ. ಬನವಾಸಿ ಕಾಲದಿಂದಲೂ ಕನ್ನಡ ಭಾಷೆ, ಸಂಸ್ಕೃತಿ ಮುಂದುವರೆದುಕೊಂಡು ಬಂದಿದ್ದು, ಪುಲಕೇಶಿ, ವಿಜಯನಗರ ದೊರೆಗಳು, ಮೈಸೂರು ಒಡೆಯರು,ಟಿಪ್ಪು ಕಾಲದಲ್ಲಿ ಕೂಡ ನಮ್ಮ ರಾಜ್ಯ ವಿಶೇಷ ಸಾಧನೆಗಳನ್ನು ಮಾಡಿದೆ. ಮೊದಲಿನಿಂದಲೂ ಭಾರತದಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನವಿದೆ. ಸ್ವಾತಂತ್ರ್ಯಾನಂತರ ಕೂಡ ಕರ್ನಾಟಕ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ. ಕರ್ನಾಟಕ, ಪ್ರಸ್ತುತ ದೇಶದ ಸಾಫ್ಟ್ ವೇರ್ ಉದ್ಯಮಕ್ಕೆ ಶೇ. 35ರಂಷಂಂಔ ಕೊಡುಗೆಯನ್ನು ನೀಡುತ್ತಿದೆ. ನಮ್ಮಲ್ಲಿ 135 ಎಂಜಿನಿಯರಿಂಗ್ ಕಾಲೇಜುಗಳಿವೆ. ಹಲವು ವೈದ್ಯಕೀಯ ಕಾಲೇಜುಗಳಿವೆ. ಇಸ್ರೋದಂತಹ ಸಂಸ್ಥೆಗಳಿವೆ. ವಿಪ್ರೋ, ಟಿಸಿಎಸ್ ನಂತಹ ಸಾಫ್ಟ್ವೇರ್  ಕಂಪನಿಗಳಿವೆ. ಇದು ಒಂದು ರೀತಿಯ ಬೆಳವಣಿಗೆ.ಆದರೆ ಕರ್ನಾಟಕದ ಮತ್ತೊಂದು ಪುಟ ತೆರೆದರೆ ಮನಸ್ಸಿಗೆ ಬೇಜಾರಾಗುತ್ತದೆ. ಕರ್ನಾಟಕದಲ್ಲಿ ಇಂದಿಗೂ ಶೇಖಡಾ 33 ರಂಷಂಂಔ ಜನ ಅನಕ್ಷರಸ್ಥರು. ಅಂದರೆ ರಾಜ್ಯದಲ್ಲಿ 2 ಕೋಟಿ ಜನರಿಗೆ ಓದಲು-ಬರೆಯಲು ಬರುವುದಿಲ್ಲ. ಹಾಗೆಯೇ ಶೇಖಡಾ 20 ಮಂದಿ ಬಡತನರೇಖೆಗಿಂತ ಕೆಳಗಿದ್ದಾರೆ. ಅಂದರೆ 1.2 ಕೋಟಿ ಮಂದಿ ಎರಡು ಹೊತ್ತಿನ ಊಟದಿಂದಲೂ ವಂಚಿತರಾಗಿದ್ದಾರೆ. ಶೇಖಡಾ 60 ಮಂದಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಒಂದು ಹಾಸಿಗೆಯನ್ನುಸಾವಿರ ರೋಗಿಗಳು ಹಂಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದನ್ನೆಲ್ಲ ನೋಡಿದಾಗ ಬೇಜಾರಾಗುತ್ತದೆ. ವಿಶ್ವ ಕನ್ನಡ ಸಮ್ಮೇಳನದ ದಿನ ನಾವು ಒಟ್ಟಿಗೆ ಸೇರಿ ಹೇಗೆ ನಮ್ಮರಾಜ್ಯದಲ್ಲಿ ಪ್ರತಿಯೊಂದು ಮಗುವಿಗೂ ಒಳ್ಳೆ ವಿದ್ಯಾಭ್ಯಾಸ, ಆರೋಗ್ಯ, ಊಟ, ಔಷಂ’ಒದಗಿಸಬಹುದೆಂಬ ಯೋಚನೆ ಮಾಡಬೇಕು. ಅಷ್ಟೇ ಅಲ್ಲ ಆ ದಿಕ್ಕಿನತ್ತ ಕೆಲಸ ಮಾಡಿ, ಗುರಿಮುಟ್ಟಿದರೆ ವಿಶ್ವ ಕನ್ನಡ ಸಮ್ಮೇಳನ ಮಾಡಿದ್ದಕ್ಕೂ ಸಾರ್ಥಕವೆನಿಸುತ್ತದೆ.
 • ವಿಶ್ವ ಕನ್ನಡ ಸಮ್ಮೇಳನದಿಂದ ಏನನ್ನು ಸಾಧಿಸಬಹುದು?-
 • ವಿಶ್ವ ಕನ್ನಡ ಸಮ್ಮೇಳನದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಶಿಕ್ಷಣತಜ್ಞರು, ಬರಹಗಾರರು, ಯುವಕ-ಯುವತಿಯರು ಎಲ್ಲರೂ ಒಂದೇ ವೇದಿಕೆಯ ಮೇಲೆಬರುತ್ತಾರೆ. ನಾವೆಲ್ಲ ಸೇರಿ ನಮ್ಮ ರಾಜ್ಯವನ್ನು ಹೇಗೆ ಮುಂದೊಯ್ಯಬೇಕು ಎಂದು ಯೋಚಿಸಲುಸಾಧ್ಯ. ಹೀಗಾಗಿ ಸಮ್ಮೇಳನದ ಅಗತ್ಯ ತುಂಬಾ ಇದೆ.
 • ಬೆಳಗಾವಿಯಲ್ಲಿ ಸಮ್ಮೇಳನ ಜರುಗುತ್ತಿರುವುದರ ಬಗ್ಗೆ..?
 • ಬೆಳಗಾವಿ ಒಂದು ಪ್ರಮುಖ ಸ್ಥಳ. ಅಲ್ಲಿ ಕನ್ನಡಿಗರು, ಮರಾಠಿಗರು ಇಬ್ಬರೂ ಇದ್ದಾರೆ.ಬೆಳಗಾವಿಯಲ್ಲಿ ಸಮ್ಮೇಳನ ನಡೆಸಿದರೆ ರಾಜ್ಯದ ಗಡಿ ಜಿಲ್ಲೆಗಳ ಬೆಳವಣಿಗೆಯ ಬಗ್ಗೆ ಯೋಚಿಸುವ ಅವಕಾಶ ದೊರೆಯುತ್ತದೆ. ಕರ್ನಾಟಕದಲ್ಲಿ ಪ್ರತಿಯೊಂದು ಮಗುವೂ ಮುಂದೆಬರಬೇಕು. ನಾವು ಮನೆಯಲ್ಲಿ ಯಾವುದೇ ಭಾಷೆ ಮಾತಾಡಲಿ ಆದರೆ ಹೊರಗೆ ಬಂದಾಗ ಮಾತ್ರ ಕನ್ನಡವನ್ನೇ ಮಾತಾಡಬೇಕು.

 • ನಾವು ಮನೆಯಲ್ಲಿ ಮಾತಾಡುವುದು ಕನ್ನಡ. ನನ್ನ ಪತ್ನಿ ಕನ್ನಡದ ಲೇಖಕಿ. ಮಗಳು ಅಕ್ಷತಾ, ಮಗ ರೋಹನ್ ಪ್ರಾಥಮಿಕ ಶಾಲೆಯಿಂದಲೇ ಕನ್ನಡ ಭಾಷೆ ಕಲಿತವರು. ಬಿಡುವುಸಿಕ್ಕಾಗಲೆಲ್ಲ ಕನ್ನಡ ಚಲನಚಿತ್ರಗಳನ್ನು ನೋಡುತ್ತೇನೆ. ಕನ್ನಡ ಪುಸ್ತಕ ಓದುತ್ತೇನೆ.ಅನಂತಮೂತರ್ಿ, ಭೈರಪ್ಪ, ಶಿವರಾಮ ಕಾರಂತ, ಕುವೆಂಪು, ಜವರೇಗೌಡ, ಹಂಪನಾ ಅವರ ಪುಸ್ತಕಗಳನ್ನು ಓದಿದ್ದೇನೆ. ತುಂಬಾ ಜನ ಕನ್ನಡ ಸ್ನೇಹಿತರಿದ್ದಾರೆ.
 • ಇತ್ತೀಚೆಗೆ ಓದಿದ ಪುಸ್ತಕ, ನೋಡಿದ ಚಲನ ಚಿತ್ರ?
 • ‘ಮುಂಗಾರು ಮಳೆ’, ‘ನಾನು, ನನ್ನ ಕನಸು’ ನೋಡಿದ ಚಲನಚಿತ್ರಗಳು. ಭೈರಪ್ಪನವರ’ಪರ್ವ’ ಇತ್ತೀಚೆಗೆ ಓದಿದ ಪುಸ್ತಕ.
 • ಕನ್ನಡದಲ್ಲಿ ಬರವಣಿಗೆ..
 • ನನಗೆ ಸಮಯದ ಅಭಾವವಿದೆ. ತಿಂಗಳಿನಲ್ಲಿ 20 ದಿನ ಪ್ರವಾಸದಲ್ಲಿರುತ್ತೇನೆ. ಹೀಗಾಗಿ ಬಿಡುವು ಸಿಗುವುದಿಲ್ಲ. ಅದೂ ಅಲ್ಲದೆ ಕಳೆದ 30-40  ವರ್ಷಗಳಿಂದ ಆಫೀಸ್ನಲ್ಲಿ ಇಂಗಿಷ್  ಭಾಷೆಯನ್ನೇ ಮಾತಾಡಿ ಕನ್ನಡದ ಮೇಲಿನ ಹಿಡಿತ ಸ್ವಲ್ಪ ಕಡಿಮೆಯಾಗಿದೆ.
 • ಕನ್ನಡ ತತ್ರಾಂಶ ಸಮಸ್ಯೆಗೆ ಪರಿಹಾರ ಏನು? ಈ ನಿಟ್ಟಿನಲ್ಲಿ ನೀವು ಪ್ರಯತ್ನಪಟ್ಟಿದ್ದೀರಾ?
 • ಇದು ಟೆಕ್ನಿಕಲ್ ವಿಚಾರ. ನೋಡಿ, ಎರಡು ರೀತಿಯ ಸಾಫ್ಟ್ವೇರ್ಗಳಿವೆ. ಒಂದು ಸಿಸ್ಟಮ್ ಸಾಫ್ಟ್ವೇರ್. ಮತ್ತೊಂದು  ಅಪ್ಲಿಕೇಷನ್  ಸಾಫ್ಟ್ವೇರ್. ಸಿಸ್ಟಮ್ ಸಾಫ್ಟ್ವೇರ್ನಲ್ಲಿ ಆಪರೇಟಿಂಗ್ ಸಿಸ್ಟಮ್, ಯುಟಿಲಿಟಿ, ವರ್ಡ್ ಪ್ರೊಸೆಸರ್ ಇತ್ಯಾದಿ ಬರುತ್ತದೆ. ನಾವು ಕೇವಲ ಅಪ್ಲಿಕೇಷನ್ ಸಾಫ್ಟ್ವೇರ್ನಲ್ಲಿದ್ದೇವೆ. ಸಿಸ್ಟಮ್ ಸಾಫ್ಟ್ವೇರ್ ಮಾಡುವುದಿಲ್ಲ. ಮೈಕ್ರೋಸಾಫ್ಟ್, ಗೂಗಲ್ ಇದನ್ನು ಮಾಡುತ್ತವೆ. ಅಪ್ಲಿಕೇಷನ್ ಸಾಫ್ಟವೇರ್ನಲ್ಲಿ ನಾವು ಯೂಸರ್ ಇಂಟರ್ಫೇಸ್ನಲ್ಲಿ ಕನ್ನಡವನ್ನು ಬಳಸಬಹುದು. ಉದಾ. ನಾವು ಮಾಡಿರುವ ಬ್ಯಾಂಕಿಂಗ್ ಪ್ಯಾಕೇಜ್. ಅದರಲ್ಲಿ ಈಗಾಗಲೇ ಕನ್ನಡ ಇಂಟರ್ಫೇಸ್ ಇದೆ. ನಮ್ಮ ಗ್ರಾಹಕರು ಯಾವ ಭಾಷೆ ಕೇಳುತ್ತಾರೋ ಅದನ್ನು ನಾವು ಕೊಡುತ್ತೇವೆ. ನಾವು ಕೇವಲ ಅಪ್ಲಿಕೇಷನ್ ಸಾಫ್ಟ್ವೇರ್ನಲ್ಲಿರುವುದರಿಂದ ನಮಗೆ ಯಾವುದೇ ರೀತಿಯ ಇಂಟರ್ಫೇಸ್ನೀಡಲು ತೊಂದರೆಯಿಲ್ಲ. ಗ್ರಾಹಕರು ಕೇಳುವ ಭಾಷೆಯಲ್ಲೇ ನೀಡುತ್ತೇವೆ.
 • ಹಾಗಾದರೆ ನಾರಾಯಣ ಮೂರ್ತಿಯವರಿಂದ ಇದಕ್ಕೆ ಪರಿಹಾರ ಸಾಧ್ಯವಿಲ್ಲವೆ?
 • ನಮ್ಮ ನೈಪುಣ್ಯತೆ ಎಲ್ಲಿದೆಯೋ ಅಲ್ಲಿ ನಾವು ಕೆಲಸ ಮಾಡಬಹುದು. ಅಲ್ಲಿ ವ್ಯಾ ಲ್ಯೂ ಅಡಿಷನ್ ಮಾಡಬಹುದು. ನಾನು ಎಂಜಿನಿಯರ್. ಆ ಬದಲು ಡಾಕ್ಟರ್ ಕೆಲಸ ಮಾಡುತ್ತೇನೆ ಅಂದರೆ ಸಾಧ್ಯವಿಲ್ಲ. ನಾವು ಅಪ್ಲಿಕೇಷನ್ ಸಾಫ್ಟ್ವೇರ್ ನಲ್ಲಿ ಕನ್ನಡ ಖಂಡಿತ ಬಳಸುತ್ತೇವೆ.ಆದರೆ ಸಿಸ್ಟಮ್ ಸಾಫ್ಟ್ ವೇರ್ ಅನ್ನು ಮೈಕ್ರೋಸಾಫ್ಟ್, ಯೂನಿಕ್ಸ್ ಇತ್ಯಾದಿ ಕಂಪನಿಗಳು ಮಾತ್ರ ಮಾಡಬಹುದು. ನಾವು ಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ಟ್ರಕ್ ತಯಾರು ಮಾಡುವವರಿಗೆ ಸ್ಕೂಟರ್ ಮಾಡಿಕೊಡಿ ಅಂದರೆ ಸಾಧ್ಯವಿಲ್ಲ ತಾನೆ?
 • ಜಗತ್ತಿನ ಭೂಪಟದಲ್ಲಿ ಕನ್ನಡದ ಸ್ಥಾನ ಏನು?
 • ಪ್ರಪಂಚದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ 27 ನೇ ಸ್ಥಾನದಲ್ಲಿದೆ. ಎರಡನೆಯದಾಗಿ,ನಮ್ಮ ಹೊರನಾಡು ಭಾರತೀಯರಲ್ಲಿ ಕನ್ನಡಿಗರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಕನ್ನಡಿಗರು ವೈದ್ಯಕೀಯ, ಎಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಆದರೆ ವಿಶ್ವ ವಿದ್ಯಾನಿಲಯಗಳಲ್ಲಿ ಕನ್ನಡ ಕಲಿಕೆಯ ಅವಕಾಶ ಕಡಿಮೆಯಿದೆ. ಹೆಚ್ಚಾಗಿ ಹಿಂದಿ, ತಮಿಳು ಹೇಳಿಕೊಡುತ್ತಾರೆ.
 • ಜಾಗತೀಕರಣದಿಂದ ಕನ್ನಡ, ಕರ್ನಾಟಕದ ಮೇಲೆ ಹೇಗೆ ಪರಿಣಾಮವಾಗುತ್ತಿದೆ?
 • ಜಾಗತೀಕರಣವನ್ನು ನಾನು ಬೇರೆಯದೇ ದೃಷ್ಟಿಯಲ್ಲಿ ನೋಡುತ್ತೇನೆ. ಜಾಗತೀಕರಣದಿಂದ ರಾಜ್ಯಕ್ಕೆ ಸಹಾಯವಾಗಿದೆ. ಯುವಕ ಯುವತಿಯರಿಗೆ ಸಾಫ್ಟ್ವೇರ್ನಲ್ಲಿ ಒಳ್ಳೆ ಕೆಲಸ, ಒಳ್ಳೆಸಂಬಳ ಸಿಕ್ಕಿದೆ. ಅಷಇಔಂ ಅಲ್ಲ ಒಟ್ಟಾರೆ ಉದ್ಯೋಗಾವಕಾಶ ಹೆಚ್ಚಿದೆ. ಮೊನ್ನೆ ಉತ್ತರಕರ್ನಾಟಕದವರೊಬ್ಬರು ಹೇಳುತ್ತಿದ್ದರು, ಎರಡು ವರ್ಷದ ಹಿಂದೆ ನಮ್ಮ ಯುವಕಯುವತಿಯರಿಗೆ 2 ಸಾವಿರ ರೂಪಾಯಿ ಸಂಬಳ ಸಿಗುವುದು ಕಷ್ಟವಿತ್ತು. ಆದರೆ ಇದೀಗ ಬಿಪಿಓ ಉದ್ಯಮ ಬಂದಿದ್ದರಿಂದ ಅವರಿಗೆ 10-12 ಸಾವಿರ ರೂಪಾಯಿ ಸಂಬಳದ ಕೆಲಸಗಳು ದೊರೆಯುತ್ತಿವೆ ಅಂತ. ಮೊದಲು ನಮ್ಮ ಜನ ಕೆಲಸಕ್ಕಾಗಿ ಮುಂಬೈ ಗೆಥತ ಹೋಗುತ್ತಿದ್ದರು. ಈಗ ಬೆಂಗಳೂರಿಗೆ ಬರುತ್ತಾರೆ. ಎಲ್ಲ ರೀತಿಯ ಔಷದಿ, ಉಪಕರಣಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಸಂಪರ್ಕ ಸಾಧನಗಳು, ಮಾಧ್ಯಮಗಳು ಹೆಚ್ಚಾಗಿವೆ.. ಫೇಸ್ಬುಕ್, ಟ್ವಿಟರ್ ನಮ್ಮ ಜನರ ಸಂಪರ್ಕ ಕ್ಷಮತೆಯನ್ನು ಹೆಚ್ಚಿಸಿದೆ.
 • ಕನ್ನಡ, ಕರ್ನಾಟಕವನ್ನು ಬೆಳಸುವಲ್ಲಿ ಐಟಿ ಜವಾಬ್ದಾರಿ ಏನು?
 • ನೋಡಿ, ಕನರ್ಾಟಕದ ಚರಿತ್ರೆಯಲ್ಲೇ ಇದುವರೆಗೆ ಯಾವುದೇ ಉದ್ಯಮ ಇಷ್ಟು  ದೊಡ್ಡಸಂಖ್ಯೆಯಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ನೀಡಿಲ್ಲ. ಐಟಿ ಅದನ್ನು ಸಾಧ್ಯವಾಗಿಸಿದೆ.ಇದು ಪ್ರಮುಖವಾಗಿರುವ ಕೆಲಸ. ಮೊದಲು ಬಡತನ ಹೋಗಬೇಕು. ಬಡತನಹೋಗಬೇಕಾದರೆ ಉದ್ಯೋಗಗಳು ಹೆಚ್ಚಾಗಬೇಕು. ಅದು ನಮ್ಮ ಮೊದಲ ಆದ್ಯತೆ.ಅದನ್ನು ಹೋಗಲಾಡಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಯಾವ ಉದ್ಯಮವೇ ಆಗಲಿಅದರ ಮುಖ್ಯ ಉದ್ದೇಶ ಆದಷ್ಟು ಒಳ್ಳೆ ಸಂಬಳ ಕೊಡುವ ಹೆಚ್ಚಿನ ಉದ್ಯೋಗಗಳ ಸೃಷ್ಟಿ.._ ಐಟಿಯಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಹೇಗೆ ನೋಡುತ್ತೀರಿ? -ನಾವು ರಾಜ್ಯದ ಸುಮಾರು 90 ಕಾಲೇಜುಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುತ್ತೇವೆ. ಈಬಾರಿ 25 ಸಾವಿರ ಜನರನ್ನು ಹೊಸದಾಗಿ ತೆಗೆದುಕೊಂಡಿದ್ದೇವೆ. ನಾವು ಕೆಲಸಮಾಡುತ್ತಿರುವುದು ಹೊರಗಿನವರಿಗಾಗಿ. ಅವರು ನಾವು ಕನ್ನಡಿಗರಿಂದ ಕೆಲಸಮಾಡಿಸುತ್ತಿದ್ದೇವೆಯೇ, ತಮಿಳರಿಂದ ಮಾಡಿಸುತ್ತಿದ್ದೇವೆಯೇ ಎಂದು ಕೇಳುವದಿಲ್ಲ. ಅವರಿಗೆಬೇಕಾಗಿರುವುದು ನಿಗದಿತ ಅವಧಿಯೊಳಗೆ ನೀಡಿರುವ ಕೆಲಸವನ್ನು ಪೂರೈಸುವುದು.ಆದ್ದರಿಂದ ನಮ್ಮ ಟೆಸ್ಟ್ನಲ್ಲಿ ಯಾರು ಪಾಸ್ ಆಗುತ್ತಾರೋ ಅಂತಹವರಿಗೆ ಕೆಲಸಕೊಡುತ್ತೇವೆ.
 • ಸಮ್ಮೇಳನದ ನಂತರ ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಆಗಬೇಕಾದ ಕೆಲಸ ಏನು?
 • ಕರ್ನಾಟಕ ಭಾರತದಲ್ಲೇ ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ರಾಜ್ಯ ಅನಿಸಿಕೊಳ್ಳಬೇಕು. ಹೀಗೆ ಅನಿಸಿಕೊಳ್ಳಲು ಏನು ಮಾಡಬೇಕು ಎಂಬ ಚಿಂತನೆ ನಡೆಯಬೇಕು. ಎರಡನೆಯದಾಗಿ ನಾವು ಇಡೀ ಪ್ರಪಂಚದಲ್ಲಿ ಮೊದಲ ಹತ್ತು ನಗರಗಳಲ್ಲಿ ಹೇಗೆ ಮುಂಚೂಣಿಯಲ್ಲಿರ ಬೇಕುಎಂಬುದನ್ನೂ ಯೋಚಿಸಬೇಕು. ನಾವು ಕರ್ನಾಟಕದಲ್ಲಿ ಆರು ಕೋಟಿ ಜನರಿದ್ದೇವೆ. ಫ್ರಾನ್ಸ್, ಥಾಯ್ಲೆಂಡ್, ಇಂಗ್ಲೆಂಡ್ನಲ್ಲಿ ಕೂಡ ಇರುವುದು ತಲಾ ಆರು ಕೋಟಿ ಜನರೇ.ಆದರೆ ಆ ದೇಶಗಳು ಬೆಳೆದಿರುವ ರೀತಿ ನಿಜಕ್ಕೂ ಅದ್ಭುತ. ಅವರಿಗೆ ಹೋಲಿಸಿದರೆನಾವು ಇನ್ನೂ ಹೆಚ್ಚು ಕೆಲಸ ಮಾಡಬೇಕಾದ ಅಗತ್ಯವಿದೆ. ಆದ್ದರಿಂದ ವಿಶ್ವ ಕನ್ನಡ ಸಮ್ಮೇಳನ ಮುಗಿಯುವ ಹೊತ್ತಿಗೆ ನಾವೆಲ್ಲರೂ ಒಟ್ಟಿಗೆ ಬಂದು ಒಂದಾಗಿ ಕೆಲಸಮಾಡಬೇಕು. ಇದು ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ. ಕೇವಲ ಒಬ್ಬ ರಾಜಕಾರಣಿ,ಒಬ್ಬ ಕವಿ, ಒಬ್ಬ ಉದ್ಯಮಿ ಏನೂ ಮಾಡಲೂ ಸಾಧ್ಯವಿಲ್ಲ. ಎಲ್ಲಾರೂ ಒಗ್ಗೂಡಿ ಕೆಲಸಮಾಡಿದಾಗ ಮಾತ್ರ ಕರ್ನಾಟಕವನ್ನು ಚಿನ್ನದ ರಾಜ್ಯವನ್ನಾಗಿ ಮಾಡಲು ಸಾಧ್ಯ